Bengaluru

ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ: ಮತ್ತಷ್ಟು ದಿನ ಜೈಲೇ ಗತಿ

ಬೆಂಗಳೂರು, ಸೆ 28- ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟಿನ ಆರೋಪ ಪ್ರಕರಣಕ್ಕೆ ಸಂಬಂಧಿಸಿ, ಎನ್‍ ಡಿಪಿಎಸ್ ವಿಶೇಷ ನ್ಯಾಯಾಲಯವು ನಟಿಯರಾದ ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿ ವಜಾಗೊಳಿಸಿದೆ. ಹೀಗಾಗಿ ನಟಿಯರಿಬ್ಬರಿಗೂ ಮತ್ತಷ್ಟು ದಿನ ಜೈಲೇ ಗತಿಯಾಗಿದೆ.
ಎನ್ ಡಿಪಿಎಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಂ ಸೀನಪ್ಪ ಅವರು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಗಿಣಿ ಮತ್ತು ಸಂಜನಾ ಹೈಕೋರ್ಟ್ ಮೊರೆಹೋಗುವ ನಿರೀಕ್ಷೆಯಿದೆ. ಮುಂದಿನ ಎರಡು ದಿನಗಳಲ್ಲಿ ನಟಿಯರ ಪರ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಸೆ, 14 ರಿಂದ ನಟಿ ರಾಗಿಣಿ ಜೈಲಿನಲ್ಲಿದ್ದರೆ, ನಟಿ ಸಂಜನಾ ಗಲ್ರಾನಿ ಸೆ. 16ರಿಂದ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ನಟಿಯರ ವಿರುದ್ಧ ಡ್ರಗ್ಸ್ ಸೇವನೆ ಮಾತ್ರವಲ್ಲದೆ ಪೆಡ್ಲಿಂಗ್ ಮಾಡಿರುವ ಆರೋಪವನ್ನು ದಾಖಲೆ ಸಮೇತ ನ್ಯಾಯಾಲಯದ ಮುಂದಿಟ್ಟ ಸಿಸಿಬಿ ಅಧಿಕಾರಿಗಳು, ವಿಶೇಷ ಜಾಮೀನು ನೀಡಿದಲ್ಲಿ ಕೃತ್ಯ ಮುಂದುವರಿಯುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ಮನವಿ ಮಾಡಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!