New Delhi

ಭಗತ ಸಿಂಗ್ ಜನ್ಮದಿನ: ಪ್ರಧಾನಿ ಶ್ರದ್ಧಾಂಜಲಿ

ನವದೆಹಲಿ, ಸೆ 28- ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ಇಂದು ತಾಯಿ ಭಾರತಿಯು ‍ಧೈರ್ಯಶಾಲಿ ಪುತ್ರ ಭಗತ್ ಸಿಂಗ್ ಅವರಿಗೆ ಜನ್ಮ ನೀಡಿದ ದಿನ. ಅವರ ಶೌರ್ಯದ ಕಥೆಗಳು ಮುಂದಿನ ಪೀಳಿಗೆಗೆ ದೇಶದ ಜನತೆಗೆ ಸ್ಫೂರ್ತಿ ನೀಡುತ್ತವೆ ‘ ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದ ಮೋದಿ, “ಸೆಪ್ಟೆಂಬರ್ 28, ನಾವು ಹುತಾತ್ಮ ಭಗತ್ ಸಿಂಗ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತೇವೆ. ಸೂರ್ಯನು ಮುಳುಗದ ಸಾಮ್ರಾಜ್ಯವೆಂದು ಕರೆಸಿಕೊಂಡಿದ್ದ ಬ್ರಿಟಿಷ್ ಸರ್ಕಾರಕ್ಕೆ 23 ವರ್ಷ ವಯಸ್ಸಿನ ಯುವಕನಿಂದ ಭಯಭೀತಿ ಉಂಟಾಗಿತ್ತು” ಎಂದು ಹೇಳಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!