Lucknow

ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ಬುಧವಾರ ಪ್ರಕಟ

ಲಕ್ನೋ , ಸೆ 28 – ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಅಡಿಪಾಯ ಸಮಾರಂಭದ ಎರಡು ತಿಂಗಳ ನಂತರ ಬುಧವಾರ ಬಾಬರಿ ಧ್ವಂಸ ಸಂಬಂಧ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಲಿದೆ.

1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ 28 ವರ್ಷಗಳ ನಂತರ, ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಸೆ 30 ರಂದು ತನ್ನ ತೀರ್ಪನ್ನು ನೀಡಲಿದೆ.
ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಡಾ ಮುರಳಿ ಮನೋಹರ್ ಜೋಷಿ, ಉಮಾಭಾರತಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‍ ಸಿಂಗ್ ಸೇರಿದಂತೆ ಎಲ್ಲಾ 32 ಆರೋಪಿಗಳ ಹಾಜರಾತಿಯಲ್ಲಿ ತೀರ್ಪು ಪ್ರಕಟವಾಗಲಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಬಾಬರಿ ಮಸೀದಿ ಧ್ವಂಸ ಸಂಚು ಕುರಿತ ತೀರ್ಪನ್ನು ಅದೇ ದಿನ ಪ್ರಕಟಿಸಲಾಗುವುದು.
ವಿಶೇಷ ನ್ಯಾಯಾಧೀಶ ಎಸ್ ಕೆ ಯಾದವ್ ಅವರು ಬುಧವಾರ ಬೆಳಿಗ್ಗೆ ತಮ್ಮ ತೀರ್ಪನ್ನು ನೀಡಲಿದ್ದಾರೆ. ಇದು ನ್ಯಾಯಾಧೀಶರಾಗಿ ಅವರ ನ್ಯಾಯಾಂಗ ವೃತ್ತಿ ಜೀವನದ ಕೊನೆಯ ದಿನವಾಗಲಿದೆ.
ಕಳೆದ ಆಗಸ್ಟ್ 5 ರಂದು ನಡೆದ ಐತಿಹಾಸಿಕ ಭೂಮಿ ಪೂಜಾನ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ನಂತರ ಅಯೋಧ್ಯೆಯ ಸಣ್ಣ ಜಾಗದಲ್ಲಿ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!