Mumbai

ರಾಹುಲ್ ಗಾಂಧಿ ಭವಿಷ್ಯದಲ್ಲಿ ದೇಶದ ಪ್ರಧಾನಿ -ದೀಪಿಕಾ ಪಡುಕೋಣೆ

ಮುಂಬೈ,ಸೆ 28- ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್ ಪ್ರಮುಖ ನಾಯಕ ರಾಹುಲ್ ಗಾಂಧಿಯನ್ನು ಅವರನ್ನು ಪ್ರಶಂಸೆ ವ್ಯಕ್ತಪಡಿಸಿರುವ ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೀಪಿಕಾ, ರಾಹುಲ್ ಗಾಂಧಿ ಅವರ ಬಗ್ಗೆ ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಭವಿಷ್ಯದಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ. ರಾಹುಲ್ ನನ್ನ ನೆಚ್ಚಿನ ನಾಯಕರ ಪೈಕಿ ಒಬ್ಬರು. ನಿಜವಾದ ದೇಶಭಕ್ತಿ ರಾಹುಲ್‌ ಅವರಲ್ಲಿ ತಮಗೆ ಕಂಡು ಬರುತ್ತದೆ. ಅವರು ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದರು, ಅತ್ಯುತ್ತಮ ನಾಯಕನಿಗೆ ಅವರೊಬ್ಬ ಉದಾಹರಣೆಯಾಗಿದ್ದು ಅವರು ಪ್ರಧಾನಿ ಹುದ್ದೆಗೇರುವ ವಿಶ್ವಾಸವಿದೆ ಎಂದು ಹೇಳಿದ್ದರು.

ಆದರೆ, ಡ್ರಗ್ಸ್ ಪ್ರಕರಣದ ಭಾಗವಾಗಿ ಶನಿವಾರ ದೀಪಿಕಾ ಪಡುಕೋಣೆ ವಿಚಾರಣೆ ಕೊನೆಗೊಂಡ ನಂತರ ಈ ವಿಡಿಯೋ ವೈರಲ್ ಆಗಿದೆ. ಒಂದು ವರ್ಗದವರು ಇದನ್ನು ವಿಪರೀತ ಟ್ರೋಲ್ ಮಾಡುತ್ತಿದ್ದಾರೆ. ಜೆ ಎನ್ ಯು ಘಟನೆಗೆ ಸಂಬಂಧಿಸಿದಂತೆ ದೀಪಿಕಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವಿನ ನಂತರ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣದ ತನಿಖೆಯನ್ನು ಎನ್‌ ಸಿ ಬಿ ಚುರುಕುಗೊಳಿಸಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ನಟಿಯರಾದ ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಕಪೂರ್ ಅವರನ್ನು ವಿಚಾರಣೆ ನಡೆಸಿದ್ದು, ನಟಿಯರಿಂದ ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!