New Delhi

ದೇಶಾದ್ಯಂತ 60 ಲಕ್ಷ ದಾಟಿದ ಸೋಂಕು ಪ್ರಕರಣ

ನವದೆಹಲಿ, ಸೆ 28 – ಕಳೆದ 24 ಗಂಟೆಗಳಲ್ಲಿ 82,170 ಹೊಸ ಪ್ರಕರಣಗಳ ತೀವ್ರ ಏರಿಕೆ ದಾಖಲಿಸಿದ ನಂತರ ದೇಶದಲ್ಲಿ ಕೊರೋನಾ ಸೋಂಕಿನ ಸಂಖೈ 60 ಲಕ್ಷ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನವೀಕೃತ ಅಂಕಿ ಅಂಶದ ಪ್ರಕಾರ ಈ ಸಂಖ್ಯೆ 60,74,702 ಕ್ಕೆ ತಲುಪಿದೆ.

ಮತ್ತೊಂದೆಡೆ, ಇದೇ ಅವಧಿಯಲ್ಲಿ 74,893 ಗುಣಪಡಿಸಿದ ಮತ್ತು ಬಿಡುಗಡೆಯಾದ ಪ್ರಕರಣಗಳು 50 ಲಕ್ಷ ದಾಟಿದ್ದು,50,16,520 ರಷ್ಟಿದೆ.

ಕಳೆದ 24 ಗಂಟೆಯಲ್ಲಿ 1,039 ಮಂದಿ ಮೃತಪಟ್ಟಿದ್ದು, ಒಟ್ಟು ಸಂಖ್ಯೆ 9,5542ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 7,09,394 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಭಾನುವಾರದವರೆಗೆ 7,19,67,230 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.

ಮಹಾರಾಷ್ಟ್ರವು ಗರಿಷ್ಠ ಸೋಂಕು ಪ್ರಕರಣ ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ. ಜಾಗತಿಕವಾಗಿ, ಅಮೆರಿಕ ಹೆಚ್ಚು ಸೋಂಕಿಗೆ ಒಳಗಾಗಿದ್ದು, ಭಾರತ ಮತ್ತು ಬ್ರೆಜಿಲ್ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!