Bagalkotte

ಬಾಗಲಕೋಟೆಯಲ್ಲಿ ಬೀದಿ ನಾಟಕ ಪ್ರದರ್ಶಿಸಿ ಪ್ರತಿಭಟಿಸಿದ ರೈತರು

ಬಾಗಲಕೋಟೆ, ಸೆ.28-  ಕೃಷಿ ಕಾಯ್ದೆ ತಿದ್ದುಪಡಿ, ಮಸೂದೆ ವಿರೋಧಿಸಿ ರಾಜ್ಯಾದ್ಯಂತ ಬಂದ್ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು, ಕನ್ನಡಪರ ಸಂಘಟನೆ ಸೇರಿ ಬೀದಿ ನಾಟಕ ಪ್ರದರ್ಶಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.

ನಗರದ ಬಸವೇಶ್ವರ ವೃತ್ತದಲ್ಲಿ ರೈತ ಸಂಘ, ಕರವೇ, ಜಯಕರ್ನಾಟಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸುವುದರ ಮೂಲಕ ರಸ್ತೆಯ ಮಧ್ಯೆದಲ್ಲೇ ಉಪಹಾರ ಸೇವಿಸಿದರು.
ಪ್ರತಿಭಟನೆ ವೇಳೆ ಜ್ಯೂನಿಯರ್ ಉಪೇಂದ್ರ ಎಂದೇ ಗುರುತಿಸಿಕೊಂಡಿರುವ ಖ್ಯಾತ ಕಲಾವಿದ ಆರ್.ಡಿ. ಬಾಬು ಅವರು ರೈತನ ಸಂಕಷ್ಟ ಕುರಿತಾದ ಅಣುಕು ಪ್ರದರ್ಶನ ಮಾಡಿ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮುಂದೆ ರೈತನೋರ್ವ ತನ್ನ ಗೋಳು ಹೇಳಿಕೊಳ್ಳುತ್ತಿರುವ ದೃಶ್ಯ ಎಲ್ಲರ ಮನಮುಟ್ಟುವಂತಿತ್ತು. ರೈತನ ಹೋಲಿಕೆಯ ವೇಷ ಧರಿಸಿ ಸಖತ್ ಡೈಲಾಗ್ ಹೊಡೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟನೆಗೆ ಬೆಂಬಲಿಸಿದರು. ಇನ್ನು, ಆರ್.ಡಿ‌.ಬಾಬು ಅವರು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಈ ಸಂದರ್ಭದಲ್ಲಿ ಘೋಷಣೆ ಕೂಗುವ ಮೂಲಕ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ಪ್ರತಿಭಟನೆಯಲ್ಲಿ ಅಂಗವಿಕಲ ಬಾಬು ಅವರು ‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿ ನೋಡಲ್ಲಿ’ ರೈತ ಗೀತೆಗೆ ನಡುರಸ್ತೆಯಲ್ಲೇ ಕುಳಿತು ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.

Leave a Reply

Your email address will not be published. Required fields are marked *

Back to top button
error: Content is protected !!