New Delhi

ಪಿಎಂ ಕೇರ್ಸ್ ನಿಧಿಗೆ ಬ್ಯಾಂಕ್ ಉದ್ಯೋಗಿಗಳಿಂದ 200 ಕೋಟಿರೂ ದೇಣಿಗೆ

ನವದೆಹಲಿ, ಸೆ 28 – ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಆರಂಭಿಸಲಾಗಿರುವ ಪಿ.ಎಂ.ಕೇರ್ಸ್ (ತುರ್ತು ಪರಿಸ್ಥಿತಿಗಳಲ್ಲಿ ಪ್ರಧಾನ ಮಂತ್ರಿ ಅವರ ನಾಗರಿಕ ನೆರವು ಮತ್ತು ಪರಿಹಾರ ) ನಿಧಿಗೆ ಭಾರಿ ಪ್ರಮಾಣದ ದೇಣಿಗೆಗಳು ಹರಿದು ಬರುತ್ತಿವೆ.

ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದ ಮಾಹಿತಿಯಂತೆ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಏಳು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಇತರ ಆರ್ಥಿಕ ಸಂಸ್ಥೆಗಳು ಸೇರಿ ಪಿ.ಎಂ ಕೇರ್ಸ್ ನಿಧಿಗೆ 200 ಕೋಟಿ ದೇಣಿಗೆ ನೀಡಿವೆ. ಆರ್ ಬಿ ಐ 7.34 ಕೋಟಿ ದೇಣಿಗೆ ನೀಡಿದ್ದು, ಎಸ್ ಬಿ ಐ 107 .95 ಕೋಟಿ ತಮ್ಮ ಉದ್ಯೋಗಿಗಳ ವೇತನದಿಂದ ದೇಣಿಗೆ ನೀಡಲಾಗಿದೆ.
ಸಿ ಎಸ್‌ ಆರ್, ಎಲ್‌ಐಸಿ, ಜಿಐಸಿ ಜೊತೆಗೆ ರಾಷ್ಟ್ರೀಯ ವಸತಿ ಬ್ಯಾಂಕ್ ಒಟ್ಟಾಗಿ ರೂ. 144.5 ಕೋಟಿ ದೇಣಿಗೆ ನೀಡಿವೆ. ಜೀವ ವಿಮಾ ನಿಗಮವೊಂದೇ ರೂ. 113.63 ಕೋಟಿ ನೀಡಿದ್ದು, ಅದರಲ್ಲಿ ಉದ್ಯೋಗಿಗಳ ವೇತನದಿಂದ ರೂ. 8.64 ಕೋಟಿ, ಕಾರ್ಪೊರೇಟ್ ಸಂವಹನ ಅಡಿಯಲ್ಲಿ 100 ಕೋಟಿ, ಗೋಲ್ಡನ್ ಜುಬಿಲಿ ಪ್ರತಿಷ್ಠಾನದ ಅಡಿಯಲ್ಲಿ ರೂ. 5 ಕೋಟಿ ನೀಡಿದೆ. ಎಲ್ಲಾ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಒಟ್ಟು . 204.75 ರೂ ಕೋಟಿ ದೇಣಿಗೆ ನೀಡಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!