New Delhi

ಸಿವಿಲ್ಸ್ ಪೂರ್ವ ಭಾವಿ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ; ಯುಪಿಎಸ್ಸಿ

ನವದೆಹಲಿ, ಸೆ 28-  ಅಕ್ಟೋಬರ್ 4ರಂದು ನಡೆಯಬೇಕಿರುವ ನಾಗರೀಕ ಸೇವೆಗಳ ಪೂರ್ವ ಭಾವಿ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಕೊರೊನಾ ಹಿನ್ನಲೆಯಲ್ಲಿ ಪೂರ್ವ ಭಾವಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಸಲ್ಲಿಸಲಾಗಿದ್ದ ಆರ್ಜಿಗಳನ್ನು ಸುಪ್ರೀಕೋರ್ಟ್ ಸೋಮವಾರ ವಿಚಾರಣೆ ನೆಡೆಸಿತು. ಆದರೆ, ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಯು ಪಿ ಎಸ್ ಸಿ ಪರ ವಕೀಲರು ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿದರು.
ಆದರೆ ಪರೀಕ್ಷೆಗಳನ್ನು ಯಾವ ಕಾರಣಗಳಿಗಾಗಿ ಮುಂದೂಡಲು ಸಾಧ್ಯವಿಲ್ಲ ಎಂಬುದಕ್ಕೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಲು ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಯು ಪಿ ಎಸ್ ಸಿಗೆ ಆದೇಶಿಸಿದೆ ಮುಂದಿನ ವಿಚಾರಣೆ ಬುಧವಾರಕ್ಕೆ ಮುಂದೂಡಿದೆ.
ಈಗಾಗಲೇ ನಿಗದಿಪಡಿಸಿರುವಂತೆ ಕೇಂದ್ರ ಲೋಕಸೇವಾ ಆಯೋಗದ ಸಿವಿಲ್ಸ್ ಸೇವೆಗಳ ಪೂರ್ವ ಭಾವಿ ಪರೀಕ್ಷೆ ಅಕ್ಟೋಬರ್ 4 ರಂದು ನಡೆಯಬೇಕಿದೆ.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ತೀವ್ರಗೊಳ್ಳುತ್ತಿರುವ, ವಿವಿಧ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಮೂರು ತಿಂಗಳ ಕಾಲ ಮುಂದೂಡಲು ಆದೇಶಿಸಬೇಕೆಂದು 20 ಮಂದಿ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಆರ್ಜಿ ಸಲ್ಲಿಸಿದ್ದಾರೆ. ಆದರೆ, ಕೊರೊನಾ ಸಾಂಕ್ರಾಮಿಕದಿಂದ ಕಳೆದ ಮೇ 31ರಂದು ನಡೆಸಬೇಕಿದ್ದ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿ ಜೂನ್ 6ಕ್ಕೆ ನಿಗದಿಪಡಿಸಲಾಗಿತ್ತು. ನಂತರ ಅದನ್ನು ಅಕ್ಟೋಬರ್ 4ಕ್ಕೆ ನಿಗದಿಪಡಿಸಿದ್ದು, ಪರೀಕ್ಷಾ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳಿಗೆ ಈಗಾಗಲೇ ಬಿಡುಗಡೆಗೊಳಿಸಲಾಗಿದೆ.
.
ಯುಪಿಎಸ್‌ಸಿ ನೇಮಕಾತಿ ಪರೀಕ್ಷೆ ಶೈಕ್ಷಣಿಕ ಪರೀಕ್ಷೆ ಅಲ್ಲ. ಆದ್ದರಿಂದ ಕೋವಿಡ್-19 ಸೋಂಕು ಹರಡುವುದು ಸುಧಾರಿಸುವ ತನಕ ಕನಿಷ್ಠ 2 ರಿಂದ 3 ತಿಂಗಳು ಪರೀಕ್ಷೆ ಮುಂದೂಡಬೇಕು ಎಂದು ಆರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!