Vijayapur

ವಿಜಯಪುರ; ಸೇತುವೆ ಮುಳುಗಡೆ

ವಿಜಯಪುರ, ಸೆ 26-  ವಿಜಯಪುರ ಜಿಲ್ಲೆಯ ತಾಳಿಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ತಗ್ಗು ಪ್ರದೇಶದ ಸೇತುವೆಯೊಂದು ಮುಳಗಡೆಯಾಗಿರುವುದಲ್ಲದೆ, ಈ ಪ್ರದೇಶದ ಜನರ ಸಾಮಾನ್ಯ ಜನ ಜೀವನಕ್ಕೆ ತೊಂದರೆಯಾಗಿದೆ.

ಶನಿವಾರ ಬೆಳಿಗ್ಗೆ ಉಗರ್‌ಗೋಲ್ ಗ್ರಾಮದಲ್ಲಿ ಪ್ರವಾಹದಲ್ಲಿ ಮುಳುಗಿದ್ದ ಸೇತುವೆ ದಾಟಲು ಯತ್ನಿಸುತ್ತಿದ್ದ ಯುವಕನನ್ನು ರೈತರು ರಕ್ಷಿಸಿದ್ದಾರೆ. ಯುವಕ ತಾನು ಓಡಿಸುತ್ತಿದ್ದ ಮೋಟರ್ ಸೈಕಲ್‍ ಪ್ರವಾಹದ ಸೆಳೆತಕ್ಕೆ ಸಿಕ್ಕಿದ್ದರಿಂದ ಅದನ್ನು ಹಿಡಿಯಲು ಯುವಕ ಬೆನ್ನಟ್ಟಿದ್ದಾನೆ. ಆದರೆ, ನೀರಿನ ಸೆಳೆತಕ್ಕೆ ಯುವಕನೂ ಕೊಚ್ಚಿ ಹೋಗಿದ್ದು, ಇದನ್ನು ಗಮನಿಸಿದ ರೈತರು ಪ್ರವಾಹದಿಂದ ಆತನನ್ನು ರಕ್ಷಿಸಿ, ಮೋಟರ್ ಸೈಕಲ್‍ ಅನ್ನೂ ಮೇಲಕ್ಕೆತ್ತಿದ್ದಾರೆ.
ಹದಗಿನಾಳ್‍, ಹರ್ನಾಲ್, ಶಿವಪುರ ಮತ್ತು ನಾಗೂರು ಗ್ರಾಮಗಳ ನಿವಾಸಿಗಳು ತಮ್ಮ ಸ್ಥಳಗಳನ್ನು ತಲುಪಲು ಹತ್ತಾರು ಕಿಲೋಮೀಟರ್ ಸುತ್ತಿ ತಲುಪಿದ್ದಾರೆ. ತಾಳಿಕೋಟೆಯಲ್ಲಿ ದೇವಾಲಯಕ್ಕೆ ನೀರು ನುಗ್ಗುತ್ತಿದ್ದಂತೆ ಅಲ್ಲಿನ ಹನುಮಾನ್ ದೇವಸ್ಥಾನವನ್ನು ಮುಚ್ಚಲಾಯಿತು.
ಜಿಲ್ಲೆಯ ಇತರ ಭಾಗಗಳಲ್ಲಿ ಗಾಳಿ, ಭಾರಿ ಮಳೆ ಮುಂದುವರೆದಿದ್ದರೂ, ಫಂಡರಾಪುರ ರಸ್ತೆ ಮತ್ತು ಸೋಲಾಪುರ ರಸ್ತೆಯಲ್ಲಿನ ಸೇತುಗಳ ಮೇಲೆ ಹರಿಯುತ್ತಿದ್ದ ನೀರಿನ ಮಟ್ಟ ಕಡಿಮೆಯಾಗಿದೆ. ಆದರೂ, ಈ ಸೇತುವೆಗಳ ಮೇಲೆ ಸಂಚಾರವನ್ನು ಪುನರಾರಂಭಿಸಲು ಪೊಲೀಸರು ಅವಕಾಶ ನೀಡಿಲ್ಲ.
ರಾತ್ರಿಯಿಡೀ ಸುರಿದ ಮಳೆಯಿಂದ ನಲತ್ವಾಡ್ ಮತ್ತು ತಾಳಿಕೋಟೆ ತಾಲ್ಲೂಕಿನ ಹಲವಾರು ಹಳ್ಳಿಗಳಲ್ಲಿ ಅನೇಕ ಮನೆಗಳು ಪ್ರವಾಹಕ್ಕೆ ಸಿಲುಕಿವೆ. ಕಳೆದ ಎರಡು ದಿನಗಳಿಂದ ಈ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!