Belagavi

ಮಚ್ಛೆಯಲ್ಲಿ ಇಬ್ಬರು ಮಹಿಳೆಯರ ಹತ್ಯೆ

ಬೆಳಗಾವಿ : ಬೆಳಗಾವಿ ನಗರದ ಹೊರವಲಯದಲ್ಲಿರುವ ಮಚ್ಛೆಯ ಬ್ರಹ್ಮಲಿಂಗ ಗಲ್ಲಿಯಲ್ಲಿ ಇಬ್ಬರು ಮಹಿಳೆಯರ ಬಬ೯ರ ಹತ್ಯೆ ನಡೆದಿದೆ.

ಇಂದು ಸಂಜೆ 4 ಗಂಟೆ ಸುಮಾರಿಗೆ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಮಹಿಳೆಯರ ಕುತ್ತಿಗೆಗಳ ಮೇಲೆ ಪ್ರಹಾರ ನಡೆಲಾಗಿದೆ.

ಕೊಲೆಯಾದ ಮಹಿಳೆಯರು ಯಾರೆಂದು ಪತ್ತೆಯಾಗಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ ಬೈಕ್ ಒಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯರ ಮುಖಕ್ಕೆ ಖಾರದಪುಡಿ ಎರಚಿ ನಂತರ ಮಾರಾಕಾಸ್ತ್ರದಿಂದ ದಾಳಿಮಾಡಿ ಪರಾರಿಯಾದರೆಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಹಂತಕರ ಬೇಟೆಗೆ ಬಲೆಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!