Belagavi

ಅಂತರರಾಜ್ಯ ಗಾಂಜಾ ಪೆಡ್ಲರ್ ತಂಡ ಪತ್ತೆ, 24 ಲಕ್ಷ ಮೌಲ್ಯದ ಗಾಂಜಾ ವಶ

 

ಬೆಳಗಾವಿ : ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧದ ಪೊಲೀಸ ಕಾರ್ಯಾಚಣೆ ಮುಂದುವರೆದಿದ್ದು, ಬೆಳಗಾವಿಯ ಡಿಸಿಐಬಿ ಘಟಕ ಪೊಲೀಸರು ಹಾಗೂ ಚಿಕ್ಕೋಡಿ ಪೊಲೀಸರು ಗಾಂಜಾ ವ್ಯವಹಾರದಲ್ಲಿ ತೊಡಗಿದ್ದ ಅಂತರಾಜ್ಯ ತಂಡವೊಂದನ್ನು ಪತ್ತೆಹಚ್ಚಿದ್ದು, ಓರ್ವನನ್ನು ಬಂಧಿಸಿ 24ಲಕ್ಷ ರೂಪಾಯಿ ಮೌಲ್ಯದ 120 ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ಅಸ್ಪಾಕ್ ಮುಲ್ಲಾ ಎಂಬ ಅಂತರಾಜ್ಯ ಡ್ರಗ್ ಪೆಡ್ಲರ್ ನನ್ನು ಮಹಾರಾಷ್ಟ್ರದ ಮಿರಜ್ ಪಟ್ಟಣದಲ್ಲಿ ಬಂಧಿಸಸಲಾಗಿದ್ದು, ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ವಾಹನಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಬಂಧಿತ ಅಶ್ಪಾಕ್ ಮುಲ್ಲಾ ವಾರಂಗಣ ಹಾಗೂ ಹೈದರಾಬಾದ್ ನ ಇಬ್ಬರು ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್, ಕರ್ನಾಟಕದ ಹುಬ್ಬಳ್ಲಿ-ಧಾರವಾಡ, ಚಿಕ್ಕೋಡಿ ಸೇರಿದಂತೆ ಹಲವೆಡೆಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ದಿ ಮಾರ್ಗದಶನದಲ್ಲಿ ಡಿಸಿಐಬಿ ಘಟಕದ ಇನ್ಸ್ ಪೆಕ್ಟರ್ ನಿಂಗೇಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!