Belagavi

ಗಾಂಧಿ ಜಯಂತಿಯಂದು ಬೆಳಗಾವಿ ನೂತನ ಕಾಂಗ್ರೆಸ್ ಕಚೇರಿ ಉದ್ಘಾಟನೆ

 

ಘಟಪ್ರಭಾ, ೨೬- ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತದ ಬಳಿ ಕಟ್ಟಲಾಗಿರುವ ಕಾಂಗ್ರೆಸ್ ಕಚೇರಿಯನ್ನು ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧಿ ಜಯಂತಿ ದಿನದಂದು ಉದ್ಘಾಟಿಸಲಾಗುವದು.

ಘಟಪ್ರಭಾದಲ್ಲಿ  ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು, ಆರ್ ಟಿ ಓ ಕಚೇರಿ ಬಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿರ್ಮಿಸಲಾಗಿರುವ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ  ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ, ಎಸ್. ಆರ್. ಪಾಟೀಲ ಸೇರಿದಂತೆ ಪಕ್ಷದ ಶಾಸಕರು, ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಕಚೇರಿ ಉದ್ಘಾಟನೆಗೆ ದಿನಾಂಕ  ನಿಗದಿಯಾಗಿತ್ತು ಆದರೆ ಕೊರೋನಾ ಲಾಕ್ ಡೌನ್ ಹಾಗು ಸೋಂಕು ಹರಡುವ ಭೀತಿಯಿಂದ ಮುಂದೂಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!