Bengaluru

ಪ್ರತಿಭಟನೆಯಲ್ಲಿ ಪೆಟ್ರೋಲ್ ಸುರಿದುಕೊಂಡ ಶಿಕ್ಷಕಿ

 

ಬೆಂಗಳೂರು, ೨೬- ಫ್ರೀಡಂ ಪಾರ್ಕಿನಲ್ಲಿ ಕಳೆದ ಎಂಟು ದಿನಗಳಿಂದ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದು, ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಅದರಂತೆ ಪ್ರತಿಭಟನೆಯಲ್ಲಿದ್ದ ಶಿಕ್ಷಕಿಯೊಬ್ಬರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಈ ಕೃತ್ಯ ಸರಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತೆ ವಿನ: ಆತ್ಮಹತ್ಯೆಗಲ್ಲ ಎಂದೂ ತಿಳಿಸಲಾಗಿದೆ. ಶಿಕ್ಷಕಿ ಅಸ್ವಸ್ಥಗೊಂಡಿದ್ದು ಪೊಲೀಸರು ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆ್ಯಂಬುಲೆನ್ಸ್​ ಹತ್ತಲು ಶಿಕ್ಷಕಿ ನಿರಾಕರಿಸಿದ್ದು, ಶಿಕ್ಷಣ ಇಲಾಖೆ ತಮ್ಮ ಕುರಿತು ಗಮನಹರಿಸಲಿಯೆಂದು ಹೇಳಿದ್ದಾರೆ.

ವೇತನ ಸೇರಿ ಅನೇಕ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲು ಅನಿರ್ಧಿಷ್ಟ ಅವಧಿಯ ಪ್ರತಿಭಟನೆ ನಡೆಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!