Bengaluru

ಕಾಂಗ್ರೆಸ್ ಸಭಾತ್ಯಾಗದ ನಡುವೆ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ಅಂಗೀಕಾರ

 

ಬೆಂಗಳೂರು,ಸೆ 26- ವಿತ್ತೀಯ ಹೊಣೆಗಾರಿಕೆಯಡಿ ಸಾಲ ಮಾಡುವ ಪ್ರಮಾಣದ ಮಿತಿಯನ್ನು ಶೇ.3 ರಿಂದ ಶೇ.5 ಕ್ಕೆ ಹೆಚ್ಚಳ ಮಾಡುವ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ 2020 ಅನ್ನು ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ,ಜೆಡಿಎಸ್ ಗೈರಿನ ನಡುವೆ ಅಂಗೀಕರಿಸಲಾಯಿತು.

ವಿಧಾನ ಪರಿಷತ್ ನಲ್ಲಿ ವಿಧೇಯಕ ಮಂಡಿಸಿ ಮಾತನಾ‌ಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ,ಆದಾಯ ಮತ್ತು ವಿತ್ತೀಯ ಕೊರತೆ ನಡುವೆ ಹೊಂದಾಣಿಕೆ ಅಗತ್ಯವಿದೆ, ಶೆ.3 ಕ್ಕಿಂತ ಹೆಚ್ಚು ವಿತ್ತೀಯ ಕೊರತೆ ಇರಬಾರದು ಎಂದು ಕೇಂದ್ರ ತೀರ್ಮಾನಿಸಿತ್ತು,ಆದರೆ ಕೋವಿಡ್ ಕಾರಣದಿಂದ ಈ ಬಾರಿ ಶೇ.23 ಆದಾಯ ಕಡಿತವಾಗಿದೆ ಹಾಗಾಗಿ ಶೇ.3 ರಿಂದ ಶೇ.5 ರಷ್ಟು ಮಾಡಿಕೊಳ್ಳಬಹುಮಹುದು ಇದರಿಂದ ಹೆಚ್ಚುವರಿ ಸಾಲ ಮಾಡಿ ಆರ್ಥಿಕ ಕೊರತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.ನಮಗೆ 179920 ಆದಾಯ ಬರಬೇಕಿತ್ತು ಆದರೆ 114658 ಮಾತ್ರ ಸಂಗ್ರಹವಾಗಿದೆ. 65262 ಕೋಟಿ ಆದಾಯ ಕಡಿತವಾಗಿದೆ, ವೇತನ ಪಾವತಿ,ಪಿಂಚಣಿ ಇತ್ಯಾದಿ ನಿರ್ವಹಣೆಗೆ 150240 ಕೋಟಿ ವೆಚ್ಚ ಬರಕಿದೆ.87650 ಕೋಟಿ ಸ್ಕೀಂ ಗಳಿಗೆ ಇರಿಸಲಾಗಿತ್ತು ಆದರೆ ಈಗ ವರಮಾನ ಶೂನ್ಯವಾಗಿದೆ ಹೆಚ್ಚುವರಿ ವೆಚ್ಚವಾಗಿದೆ.11324 ಕೋಟಿ ಜಿಎಸ್ಟಿ ಬರಬೇಕಿದೆ ಇದನ್ನು ಕೇಂದ್ರ ಜವಾಬ್ದಾರಿ ತೆಗೆದುಕೊಂಡಿದೆ ಬರಲಿದೆ,ಆದರೂ ವಿತ್ತೀಯ ಕೊರತೆ ಮಿತಿಯನ್ನು ಶೇ. 5 ಕ್ಕೆ ಹೆಚ್ಚಿಸಿದರೆ ರಾಜ್ಯಕ್ಕೆ ಕಷ್ಟವಾಗಲಿದೆ, ಇಂದು ಸಾಲ ಪಡೆಯದೇ ಸರ್ಕಾರ ನಡೆಸಲು ಸಾಧ್ಯವಿಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಬಿಲ್ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ಕೇಂದ್ರದ ಮೇಲೆ‌ ಒತ್ತಡ ಹಾಕಲು ವಿಫಲವಾಗಿದೆ,ಒತ್ತಡ ಹಾಕಿ ಪಡೆಸುಕೊಳ್ಳಬೇಕು, ನಾವು ಸಂಗ್ರಹಿಸಿ ಕೊಟ್ಟ ಹಣ ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಕೇಂದ್ರ ಕೊಡದಿದ್ದರೆ ರಾಜ್ಯ ಸರ್ಕಾರ ಏನು ಮಾಡಬೇಕು, ಸಿಎಂ ಬಂದು ಉತ್ತರ ನೀಡಲಿ ಎಂದು ಆಗ್ರಹಿಸಿದರು.ಗುಜರಸತ್,ಬಿಹಾರಕ್ಕೆ‌ಕೊಡುತ್ತಸರೆ ನಮಗೆ ಏಕೆ ಕೊಡುತ್ತಿಲ್ಲ.ಸದಸ್ಯ ಮಾನೆ ಮಾತನಾಡಿ ಸದನಕ್ಕೆ ಹಿಂದೆ ತಪ್ಪು ಮಾಹಿತಿ ನೀಡಿದ್ದಾರೆ ಅವರ ಕ್ರಮ ತೆಗೆದುಕೊಳ್ಳಿ, ಜಿಎಸ್ಟಿ ಬಿಲ್ ಬಾಕಿ ಇಲ್ಲ ಎಂದು ಉತ್ತರ ನೀಡಿದ್ದವರ ವಿರುದ್ಧ ಕ್ರಮ ಅಗತ್ಯ ಎಂದರು.

ಕಾಂಗ್ರೆಸ್ ಪಿ.ಆರ್.ರಮೇಶ್ ಮಾತನಾಡಿ, ಸಾಲದ ಮಿತಿ ಹೆಚ್ಚಳದಿಂದ ಆರ್ಥಿಕ ಶಿಸ್ತು ಹಾಳಾಗಲಿದೆ, ಒಮ್ಮೆ ಮಿತಿಯನ್ನು ಸಡಿಲಿಕೆ ಮಾಡಿದರೆ ಮುಂದೆ ಅನಾಹುತವಾಗಲಿದೆ, ಶೇ.3 ರ ಮಿತಿ ಇರುವುದೇ ಆರ್ಥಿಕ ಶಿಸ್ತು ಮೀರದಿರಲಿ ಎಂದು ಈಗ ಅಶಿಸ್ತಿಗೆ ನಾವೇ ದಾರಿ ಮಾಡಿ ಕೊಟ್ಟಂತಾಗಿದೆ.ಮೂಲ ಉದ್ದೇಶವನ್ನೂ ಉಲ್ಲಂಘನೆ ಮಾಡುತ್ತಿದ್ದೇವೆ ಇದಕ್ಕೆ ಅವಕಾಶ ಕೊಡಬಾರದು ಎಂದರು.

ಇದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ಮಾಧುಸ್ವಾಮಿ ನಮಗೆ 24-25 ಸಾವಿರ ಕೋಟಿ ಜಿಎಸ್ಟಿ ಹಣ ಬರಬೇಕು, 7 ಸಾವಿರ ಕೋಟಿ ಬಂದಿದೆ,ಇನ್ನು 11 ಸಾವಿರ ಕೋಟಿಗೆ ಕೇಂದ್ರ ಜವಾಬ್ದಾರಿ ನೀಡಿದೆ,ಹಣ ಕೊಡಲಿದೆ ಇಲ್ಲವೇ ಅಷ್ಡು ಹಣದ ಸಾಲಕ್ಕೆ ಜವಾಬ್ದಾರಿ ವಹಿಸಿಕೊಂಡು ಅಸಲು ಬಡ್ಡಿ ಅವರೇ ತೀರಿಸಲಿದ್ದಾರೆ,ಇನ್ನು 7 ಸಾವಿರ ಕೋಟಿ ಬಾಕಿಬುಳಿಯಲಿದೆ ಅದನ್ನು ಪಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತದೆ.ಆದರೆ ನಮಗೆ ಕೊರೊನಾ ಕಾರಣಕ್ಕೆ ಆದಾಯ ನಷ್ಟವಾಗಿದೆ,ಪರಿಹಾರ ಕೊಡಲಾಗಿದೆ,ಬರ,ನೆರೆ,ಕೋವಿಡ್ ನಂತಹ ಸಂದರ್ಭ ಆರ್ಥಿಕ ಸ್ಥಿತಿ ಏರುಪೇರಾಗಲಿದೆ,ನಾವು ಇಷ್ಟೆಲ್ಲಾ ಆಸೆಯಿಂದ ಅಧಿಕಾರಕ್ಕೆ‌ ಬಂದರೂ ಹೊಸ ಕಾರ್ಯಕ್ರಮ ಘೋಷಣೆ ಮಾಡಲಾಗಲಿಲ್ಲ,‌ 65 ಸಾವಿರ ಕೋಟಿ ಆದಾಯ ಕಡಿತವಾಗಿದೆ,ಇನ್ನು ಜಿಎಸ್ಟಿ ಗೂ ನಿರಂತರ ಒತ್ತಡ ಹಾಕುತ್ತಿದ್ದೇವೆ,ನಿರಂತರ ಮೂರು ವರ್ಷದಿಂದ ನೆರೆ,ಬರದಂತಹ ಸಮಸ್ಯೆ ಇದೆ ಏನು ಮಾಡಬೇಕು ಹೇಳಿ? ಪ್ರಾಕೃತಿಕವಾಗಿ ಆದಾಯ ಬಾರದಿದ್ದರೆ,ಖರ್ಚು ಹೆಚ್ಚಾದರೆ ಏನು ಮಾಡಬೇಕು, ಸಾಲ ಪಡೆಯಲು ನಮಗೂ ಖುಷಿ ಇಲ್ಲ, ಆದರೆ ಏನು ಮಾಡಬೇಕು, ನಾವು ಈ ರೀತಿ ಸಾಲ ಪಡೆದಿರಲಿಲ್ಲ,ಪರಿಸ್ಥಿತಿ ಹೀಗಿದೆ, ಅಗತ್ಯಬಿದ್ದರೆ ಎಲ್ಲರೂ ಒಟ್ಟಿಗೇ ಹೋಗೋಣ.ಸಿಎಂ‌ ಕೂಡ ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿದ್ದಾರೆ ಎಂದರು.
ಈ ವೇಳೆ ಪದೇ ಪದೇ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಜಿಎಸ್ಟಿ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದು ಮರಿತಿಬ್ಬೇಗೌಡ ಹಾಗು ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ಗದ್ದಲಕ್ಕೆ ಕಾರಣವಾಯಿತು.
ನಂತರ ಹಿಂದಿನ ಸಾಲ ಸಾಕಾಯ್ತು ಎನ್ನುವ ಪ್ರಶ್ನೆಯನ್ನು ಮಾಧುಸ್ವಾಮಿ ಎತ್ತಿದರು.ಅನಿವಾರ್ಯತೆ ಕುರಿತು ವಿವರಣೆ ನೀಡಿದರು ಈ ವೇಳೆ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಧ್ಯ ಪ್ರವೇಶ ಮಾಡಿದೆ, ಹಿಂದಿನ ಸರ್ಕಾರದ ವೇಳೆ ಉಸಿರಾಡಲು ಬಿಡದಂತೆ ಕುಮಾರಸ್ವಾಮಿ ಮೇಲೆ ಒತ್ತಡ,ಹೇರಿದ್ದಿರಿ.ರೈತರ ಸಾಲ ಮನ್ನಾ ಮಾಡಿ‌ ಅಂತಾ ಪಟ್ಟು ಹಿಡಿದಿರಿ ನಾವು,ಮಾಡಿದೆವು,ನೀವು ಹೇಳಿದ್ದಕ್ಕೆ ಮಾಡಿದ್ದು ಎಂದರು ಆಗ ಬಿಜೆಪಿ ಸದಸ್ಯ ಎಂಟಿಬಿ ನಾಗರಾಜ್,ಪ್ರಣಾಳಿಕೆಯಲ್ಲಿ ಹೇಳಿದ್ದು ಮಾಡಿದ್ದಾರೆ ಅದಕ್ಕೆ ಸಾಲ ಮಾಡಿ ಎಂದು ಹೇಳಿರಲಿಲ್ಲ ಹೊರಟ್ಟಿ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಸದಸ್ಯ ಮರಿತಿಬ್ಬೇಗೌಡ ಮತ್ತೆ ಮಾತು ಮುಂದುವರೆಸಿ ಜಿಎಸ್ಟಿ ಎನ್ನುತ್ತಿದ್ದಂತೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು ಈ ವೇಳೆ ಸಭಾನಾಯಕರ ಬಗ್ಗೆ ಮರಿತಿಬ್ಬೇಗೌಡ ಹಗರವಾಗಿ ಮಾತನಾಡಿದರು.ಸಭಾನಾಯಕರಿಗೆ‌ ಗೌರವ ವಿಲ್ಲವೇ ಎಂದು ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಕಿಡಿಕಾರಿದರು ಈ ವೇಳೆ, ಮರಿತಿಬ್ಬೇಗೌಡ, ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.
ಅಂತಿಮವಾಗಿ ಚರ್ಚೆಯ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಟೀಲ್,ವೇತನ,ಭತ್ಯಯನ್ನು ಸಲಮಾಡಿ ಕೊಡುವ ಸ್ಥಿತಿ ಊಹಿಸಿರಲಿಲ್ಲ,ಆದರೂ ವಿತ್ತೀಯ ಕೊರತೆ ಮಿತ, ಶೇ.3. ಇರುವುದನ್ನು ಶೇ.4 ಕ್ಕೆ ಸೀಮಿತಿಗೊಳಿಸಿ ಸಾಕು,ಶೇ.5 ರಷ್ಟು ಬೇಡ,ನಾವು ಕೂಡ ಸಾಲಕ್ಕೆ ಜವಾಬ್ದಾರಿ ಆಗಲಿದ್ದೇವೆ,ರಾಜ್ಯವನ್ನು ಆರ್ಥಿಕ ದಿವಾಳಿಗೆ ಕಾರಣರಾಗುವುದು ಬೇಡ ಮನವಿ ಮನವಿ ಮಾಡಿದರು.
ಬಿಲ್ ಮೇಲಿನ‌ ಚರ್ಚೆಗೆ ಉತ್ತರಿಸಿದ ಸಚಿವ ಜೆ.ಸಿ ಮಾಧುಸ್ವಾಮಿ,ಆರ್ಥಿಕ ಚಟುವಟಿಕೆ ಉತ್ತಮಗೊಂಡು ಆದಾಯ ಬಂದರೆ ಹೆಚ್ಚು ಸಾಲ ಮಾಡಲ್ಲ, ಅಗತ್ಯವಿರುವಷ್ಟು ಮಾತ್ರ ಸಾಲ‌ ಮಾಡಲಿದ್ದೇವೆ,ಅನಗತ್ಯವಾಗಿ ಸಾಲ ಮಾಡಲ್ಲ,ಆದರೆ ಈಗ ಸಾಲ ಮಾಡುವುದು ಅನಿವಾರ್ಯ, ಶೇ.3 ರಿಂದ ಶೇ.5 ಕ್ಕೆ ವಿತ್ತೀಯಕೊರತೆ ಮಿತಿ ಹೆಚ್ಚಿಸುವ ಬಿಲ್ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್,ನಮ್ಮ ಮನವಿಯಂತೆ ಶೇ.4 ಕ್ಕೆ ಮಿತಿ ನಿಗದಿಪಡಿಸಲು ಒಪ್ಪಿಗೆ ನೀಡಲಿಲ್ಲ ಹಾಗಾಗಿ ಈ ವಿಧೇಯಕಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸಭಾತ್ಯಾಗ ಮಾಡಿದರು.ಕಾಂಗ್ರೆಸ್‌ ಸಭಾತ್ಯಾಗ,ಜೆಡಿಎಸ್ ಸದಸ್ಯರ ಗೈರಿನಲ್ಲಿ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!