Bengaluru

ಭೂ ಕಂದಾಯ ತಿದ್ದುಪಡಿ ಮಸೂದೆಗೆ ವಿಧಾನಸಭೆ ಅಂಗೀಕಾರ

ಬೆಂಗಳೂರು, ಸೆ 26- ಕಂದಾಯ ಸುಧಾರಣಾ ತಿದ್ದುಪಡಿ ಎರಡನೆ ವಿಧೆಯಕವನ್ನು ವಿಧಾನಸಭೆಯಲ್ಲಿ ಸುದೀರ್ಘ, ಕಾವೇರಿದ ಚರ್ಚೆ ಮತ್ತು ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೆ ಅಂಗೀಕರಿಸಲಾಯಿತು.

ವಿಧಾನನಸಭೆಯಲ್ಲಿ ಮಸೂದೆ ಕುರಿತ ಚರ್ಚೆಗೆ ಉತ್ತರ ನೀಡಿದ ಕಂದಾಯ ಸಚಿವ ಆಶೋಕ್ ಅವರು , ಕೃಷಿಯತ್ತ ಒಲವು ಇರುವ ಜನರಿಗೆ ಬಹಳ ಅನುಕೂಲ ವಾಗಲಿದೆ ಬೀಳುಬಿಟ್ಟ ಜಮೀನು ಉಪಯೋಗ ಮಾಡಲು ಪ್ರಯೋಜನವಾಗಲಿದೆ ನಾಡಿನ ಸಮಗ್ರ ಅಭಿವೃದ್ದಿಯ ಹಿನ್ನಲೆಯಲ್ಲಿ ಕಾಯಿದೆ ತರಲಾಗುತ್ತಿದೆ ಎಂದು ಬಲವಾಗಿ ಸಮರ್ಥನೆ ಮಾಡಿಕೊಂಡರು.
ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಕೆಲ ಕಾಲ ಮಾತಿಕ ಚಕಮಕಿಯೂ ನಡೆಯಿತು ನಂತರ ಮಸೂದೆಗೆ ಸದನ ದ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು .
ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿ ಸಣ್ಣ ಅತಿಸಣ್ಣ ರೈತರಿಗೆ ಮತ್ತು ಎಸ್ ಟಿ , ಎಸ್ ಟಿ ಸಮುದಾಯಕ್ಕೆ ಯಾವುದೇ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೆ ಸರಕಾರದ ಉತ್ತರದಿಂದ ಸಮಾಧಾನ ಗೊಳ್ಳದ ಕಾಂಗ್ರೆಸ್ ಸದಸ್ಯರು ರೈತ ವಿರೋಧಿ ಸರಕಾರಕ್ಕೆ ದಿಕ್ಕಾರ ಎಂಬ ಘೊಷಣೆ ಕೂಗಿ ಸಭಾತ್ಯಾಗ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!