New Delhi

ದೇಶಾದ್ಯಂತ ಒಂದೇ ದಿನ 85,362 ಸೋಂಕು ಪ್ರಕರಣ ದಾಖಲು

ನವದೆಹಲಿ, ಸೆ 26- ಕಳೆದ 24 ಗಂಟೆಗಳಲ್ಲಿ ಭಾರತವು 85,362 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಸೋಂಕಿತರ ಒಟ್ಟು ಸಂಖ್ಯೆ 59,03,932 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಇದೇ 24 ಗಂಟೆಗಳ ಅವಧಿಯಲ್ಲಿ ಸಾಂಕ್ರಾಮಿಕ ರೋಗದಿಂದ 1,089 ಜನರು ಪ್ರಾಣ ಕಳೆದುಕೊಂಡ ನಂತರ ಸಾವಿನ ಸಂಖ್ಯೆ 93,379 ಕ್ಕೆ ತಲುಪಿದೆ.
ಶುಕ್ರವಾರದಿಂದ ಗುಣಪಡಿಸಿದ ಅಥವಾ ಬಿಡುಗಡೆಯಾದ ಪ್ರಕರಣಗಳು 93,420 ಆಗಿದ್ದು, ಚೇತರಿಕೆಯ ಪ್ರಮಾಣವು ಸ್ವಲ್ಪಮಟ್ಟಿಗೆ 82.14 ಕ್ಕೆ ಏರಿದೆ.

ಇಲ್ಲಿಯ ವರೆಗೆ ಗುಣಪಡಿಸಿದ ಒಟ್ಟು ರೋಗಿಗಳು ಈಗ 48,49,584 ರಷ್ಟಿದ್ದಾರೆ.
ದೇಶದ ಮೇಲೆ ಸಕ್ರಿಯ ಕೇಸ್-ಲೋಡ್ ಕಡಿಮೆಯಾಗಿದೆ ಮತ್ತು ಪ್ರಸ್ತುತ 9,60,969 ರಷ್ಟಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 13,41,535 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೂ ಸೋಂಕು ಪತ್ತೆಗಾಗಿ
7,02,69,975 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಮಹಾರಾಷ್ಟ್ರವು ದೇಶದಲ್ಲಿಯೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ.

ಜಾಗತಿಕವಾಗಿ, ಅಮೆರಿಕ ಅತಿಹೆಚ್ಚು ಸೋಂಕಿಗೆ ಒಳಗಾಗಿದ್ದು, ನಂತರದ ಸ್ಥಾನಗಳಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳಿವೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!