Mumbai

ಎನ್ ಸಿಬಿ ವಿಚಾರಣೆಗೆ ದೀಪಿಕಾ ಪಡುಕೋಣೆ ಹಾಜರು

ಮುಂಬೈ, ಸೆ 26- ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಟಿ ದೀಪಿಕಾ ಪಡುಕೋಣೆ ಮುಂಬೈನ ನಾರ್ಕೋಟಿಕ್ಸ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಶನಿವಾರ ಸೆಪ್ಟೆಂಬರ್ 26 ರಂದು ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿಯ ವಿಶೇಷ ತನಿಖಾ ತಂಡ ನೋಟಿಸ್ ಜಾರಿ ಮಾಡಿತ್ತು. ಪತ್ನಿ ಜತೆಯಲ್ಲಿ ಆಗಮಿಸುತ್ತೇನೆಂಬ ರಣ್ವೀರ್ ಸಿಂಗ್ ಮನವಿಯನ್ನು ಎನ್ ಸಿಬಿ ತಿರಸ್ಕರಿಸಿದ್ದರಿಂದ ದೀಪಿಕಾ ಮಾತ್ರ ವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಡ್ರಗ್ ಚಾಟ್ ಬಗ್ಗೆ ಪ್ರತಿಕ್ರಿಯಿಸಬೇಕಾಗಿರುವ ದೀಪಿಕಾ ಪಡುಕೋಣೆ ವಾಟ್ಸಾಪ್ ಗ್ರೂಪ್ನ ಅಡ್ಮಿನ್ ಆಗಿದ್ದರು. ಅದೇ ಗುಂಪಿನ ಡ್ರಗ್ ಚಾಟ್ಗಳು ವೈರಲ್ ಆಗಿದ್ದು, ಇದರಲ್ಲಿ ದೀಪಿಕಾ ತನ್ನ ಮ್ಯಾನೇಜರ್ ಕರಿಷ್ಮಾ ಅವರನ್ನು ಹ್ಯಾಶ್ ಸಿಗಬಹುದೇ ಎಂದು ವಿಚಾರಿಸಿದ್ದಾರೆ.

ಹೀಗಾಗಿ ದೀಪಿಕಾ ಪಡುಕೋಣೆ ಮತ್ತು ಕರಿಷ್ಮಾ ಅವರನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸುವ ಸಾಧ್ಯತೆಯೂ ದಟ್ಟವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್‌ಗೂ ನೋಟಿಸ್ ನೀಡಲಾಗಿದ್ದು, ಇಂದು ವಿಚಾರಣೆ ಎದುರಿಸಲಿದ್ದಾರೆ. ಶುಕ್ರವಾರವಷ್ಟೆ ರಕುಲ್ ಪ್ರೀತ್ ಸಿಂಗ್ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಕೋನವನ್ನು ತನಿಖೆ ಮಾಡುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪ್ರಮುಖ ಆರೋಪಿ ರಿಯಾ ಚಕ್ರವರ್ತಿಯನ್ನು ಪ್ರಶ್ನಿಸಿದ ನಂತರ ಬಾಲಿವುಡ್‌ನಲ್ಲಿ ಡ್ರಗ್ಸ್ ಭೂಗತ ಲೋಕಕ್ಕೆ ಲಿಂಕ್ ಸಿಕ್ಕಿದೆ. ಇದರೊಂದಿಗೆ ಎನ್ಸಿಬಿ ವಿಚಾರಣೆಯನ್ನು ಮುಂದುವರೆಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!