Belagavi

ಮುಂದುವರಿದ ದಾಳಿ; 15 ಕೆಜಿ ಗಾಂಜಾ ವಶ

ಬೆಳಗಾವಿ, ೨೫- ಇತ್ತೀಚಿನ ದಿನಗಳಲ್ಲಿಯೇ ಹೆಚ್ಚೆನ್ನಬಹುದಾದ ದಾಳಿಯಲ್ಲಿ ಬೆಳಗಾವಿ ಅಪರಾಧ ವಿಭಾಗದ ಮತ್ತೊಂದು ಗಾಂಜಾ ಮಾರಾಟ ಜಾಲವನ್ನು ಪತ್ತೆಮಾಡಿ, 15 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ಹೋಲ್ ಸೇಲ್ ಫ್ರುಟ್ ಮಾರ್ಕೆಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಚಿಕ್ಕೋಡಿ ತಾಲೂಕಿನ ನಾಗರಮುನ್ನ್ನೊಳ್ಳಿಯ ಮಲ್ಲಪ್ಪ ಸಿದ್ರಾಮಣಿ ನಿಪ್ಪಾಣಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ, ಈತ ನೀಡಿದ ಮಾಹಿತಿ ಮೇರೆಗೆ ಕಲಬುರಗಿ ಜಿಲ್ಲೆಯ ಇಬ್ಬರನ್ನು ಬಂಧಿಸಿ ಅವರಿಂದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಹದಿನೈದುವರೆ ಕೆಜಿ ಗಾಂಜಾ ವಶಪಡಿಸಿಕೊಂಡು ಅವರನ್ನೂ ಬಂಧಿಸಿದ್ದಾರೆ.

ಸಿಸಿಐಬಿ ಎಸಿಪಿ ನಾರಾಯಣ ಭರಮಣಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಂಜೀವ ಕಾಂಬಳೆ ಅವರು ಕಾರ್ಯಾಚರಣೆ ನಡೆಸಿದ್ದರು.

ಮಾಳಮಾರುತಿ ಪೋಲೀಸರಿಂದಲೂ ದಾಳಿ

ಬೆಳಗಾವಿಯ ಮಾಳ ಮಾರುತಿ ಪೋಲೀಸರು ಆಟೋ ನಗರದಲ್ಲಿ ದಾಳಿಮಾಡಿ ಗಾಂಜಾ ಹೊಂದಿದ್ದ ಆರು ಜನರನ್ನು ಬಂಧಿಸಿ ಅವರಿಂದ ಐದುವರೆ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತರಿಂದ ಒಂದು ಬೈಕ್‌ ಮತ್ತು ಹತ್ತು ಸಾವಿರ ರೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!