State

ಸಚಿವ ಆನಂದಸಿಂಗ್ ಸಹೋದರಿ ಮನೆ ಮೇಲೆ ಎಸ್ಐಟಿ ದಾಳಿ

ಬಳ್ಳಾರಿ, ೨೫- ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹೊಸಪೇಟೆ ಗಣಿ ಮಾಲೀಕರಾದ, ಸಚಿವ ಆನಂದಸಿಂಗ್ ಅವರ ಸಹೋದರಿ ರಾಣಿ ಸಂಯುಕ್ತ ಅವರ ಎರಡು ಮನೆ ಮತ್ತು ಕಚೇರಿಯ ಮೇಲೆ ಎಸ್.ಐ.ಟಿ. ದಾಳಿ ಮಾಡಿದ್ದಾರೆ.

ಜೋಳದರಾಶಿ ಗುಡ್ಡದ ಬಳಿಯಿರುವ ರಾಣಿ ಸಂಯುಕ್ತ ಅವರ ಹೊಸ ಮನೆ, ಕಾಲೇಜು ರಸ್ತೆಯಲ್ಲಿನ ಹಳೇ ನಿವಾಸ ಹಾಗೂ ಎಂ.ಪಿ.ಪ್ರಕಾಶ್ ನಗರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷ್ಣ ಮಿನರಲ್ಸ್ ಮೇಲೆ ಇದ್ದ ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಿ ಸಂಯುಕ್ತ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಇನ್ ಸ್ಪೆಕ್ಟರ್ ಲಕ್ಷ್ಮಿನಾರಾಯಣ ಹಾಗೂ ರಾಘವೇಂದ್ರ ಅವರ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ.

Leave a Reply

Your email address will not be published. Required fields are marked *

Back to top button
error: Content is protected !!