Belagavi

ಬೆಳಗಾವಿಯ ೩ ಜಿಎಸ್ ಟಿ ಅಧಿಕಾರಿಗಳು ಬಲೆಗೆ

ಬೆಳಗಾವಿ, ೨೫- ಬೆಳಗಾವಿಯಲ್ಲಿ ವ್ಯವಹಾರ ನಡೆಸುತ್ತಿರುವ ಉದ್ಯಮಿಯೊಬ್ಬರಿಂದ ಐದು ಲಕ್ಷ ರೂ ಲಂಚಪಡೆಯುತ್ತಿರುವಾಗ ಬೆಳಗಾವಿಯ ಸರಕು ಮತ್ತು ಸೇವೆ ಇಲಾಖೆಯ ಮೂವರು ಅಧಿಕಾರಿಗಳನ್ನು ಬೆಂಗಳೂರಿನ CBI ಅಧಿಕಾರಿಗಳು ಶುಕ್ರವಾರ ಇಲ್ಲಿ ಬಂಧಿಸಿದ್ದಾರೆ.

ಬಂಧಿತ ಅಧಿಕಾರಿಗಳು ಉದ್ಯಮಿಯಿಂದ ಅವರು GST ತೆರಿಗೆ ತುಂಬದಿರುವದಕ್ಕೆ ಅವರ ಮೇಲೆ ಕ್ರಮ ಜರುಗದಿಸಲು ಇಪ್ಪತ್ತು ಲಕ್ಷ ರೂಪಾಯಿ ಲಂಚಕೇಳಿ ಐದುಲಕ್ಷ ರೂಪಾಯಿ ಮೊದಲ ಕಂತೆಂದು ಹಣ ಪಡೆದುಕೊಂಡನಂತರ ಸಿಬಿಐ ದಿಂದ ಬಂಧಿಸಲ್ಪಟ್ಟಿದ್ದಾರೆ.

ಬಂಧಿತರ ಬೆಳಗಾವಿಯ ಮನೆ, ಕಚೇರಿಗಳಲ್ಲದೆ ಗಾಜಿಯಾಬಾದ್ನಲ್ಲಿ ಓರ್ವ ಅಧಿಕಾರಿ ಹೊಂದಿರುವ ಮನೆಯ ಮೇಲೂ ದಾಳಿಮಾಡಿ ದಾಖಲೆ ಸಂಗ್ರಹಿಸಲಾಗಿದೆ.

ಬಂಧಿತರಲ್ಲಿ ತೆರಿಗೆ ವಿಭಾಗದ ಇಬ್ಬರು ಸುಪರಿಡೆಂಟ್ ಗಳು ಮತ್ತು ಓರ್ವ ಇನ್ಸ್‌ಪೆಕ್ಟರ್ ಸೇರಿದ್ದಾರೆ. ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಅವರನ್ನು ಧಾರವಾಡದ ನ್ಯಾಯಾಲಯದಲ್ಲಿ ಹಾಜರು ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!