Bengaluru

ಕಮಿಷನ್ ಆರೋಪ, ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ದೂರು

 

ಬೆಂಗಳೂರು, ೨೫- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಹುಮಹಡಿ ಸಮುಚ್ಚಯ ನಿರ್ಮಾಣ ಕಂಪೆನಿಯೊಂದರಿಂದ ಮುಖ್ಯಮಂತ್ರಿ ಪುತ್ರ, “ಸೂಪರ್ ಸಿಎಂ” ಎಂದೇ ಕಾಂಗ್ರೆಸ್ ನಿಂದ ಬಣ್ಣಿತವಾಗಿರುವ ಬಿ.ವೈ.ವಿಜಯೇಂದ್ರ ಅವರು ನೂರಾರು ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಜನಾಧಿಕಾರ ಸಂಘರ್ಷ ಪರಿಷತ್ ಶುಕ್ರವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ.

ವಸತಿ ಸಮುಚ್ಚಯ ನಿರ್ಮಾಣದ ಕ್ಷೇತ್ರದಲ್ಲಿರುವ ರಾಮಲಿಂಗಂ ಕನ್ವಕ್ಷನ್ಸ್ ಕಂಪೆನಿಯಿಂದ ನಗದು ಮತ್ತು ಆರ್‍ಟಿಜಿಎಸ್ ಮೂಲಕ ವಿಜಯೇಂದ್ರ ಹಣವನ್ನು ತಮ್ಮ ಕಮಿಷನಾಗಿ ಪಡೆದಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.

ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಭಾರತೀಯ ದಂಡ ಸಂಹಿತೆಯ ಅನ್ವಯ ದೂರು ದಾಖಲಿಸುವಂತೆಯೂ ಒತ್ತಾಯಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!