Belagavi

ಸುರೇಶ ಅಂಗಡಿ ಸ್ಮಾರಕ ನಿರ್ಮಾಣಕಕ್ಕೆ ಯತ್ನ -ಶೆಟ್ಟರ್

 

ಬೆಳಗಾವಿ, 25- ಬೆಳಗಾವಿಯಲ್ಲಿ ಸುರೇಶ ಅಂಗಡಿಯವರ ಸ್ಮಾರಕನಿರ್ಮಾಣದ ಕುರಿತು ಸರಕಾರದ ಗಮನ ಸೆಳೆಯುವದಾಗಿ ಅಂಗಡಿಯವರ ಬೀಗರೂ ಆಗಿರುವ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ದಿವಂಗತ ಸುರೇಶ ಅಂಗಡಿ ಸ್ಮಾರಕ ನಿರ್ಮಿಸಬೇಕು ಎನ್ನುವುದು ಅಭಿಮಾನಿಗಳ ಅಭಿಲಾಷೆ ಆಗಿದೆ. ಮುಂದಿನ ದಿನಗಳಲ್ಲಿ ಕುಟುಂಬಸ್ಥರು ಮತ್ತು ಸ್ಥಳೀಯ ನಾಯಕರ ಜೊತೆ ಚರ್ಸಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಅಂಗಡಿ ಸರಳ ಸಜ್ಜನಿಕೆಯ ರಾಜಕಾರಣಿ. ಅವರು ಅಪಾರ ಅಭಿಮಾಣಿಗಳನ್ನು ಅಗಲಿದ್ದಾರೆ, ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಅವರ ಪಾರ್ಥಿವ ಶರಿರವನ್ನು ಬೆಳಗಾವಿಗೆ ತರಲು ತಾವು ತುಂಬಾ ಪ್ರಯತ್ನ ಮಾಡಿದುದ್ದಾಗಿಯೂ ಆದರೆ ಕರೋನಾ ನಿಯಮಾವಳಿಯಂತೆ ದೆಹಲಿಯಲ್ಲಿಯೇ ಅಂತ್ಯಕ್ರಿಯೆ ಮಾಡಬೇಕಾಯಿತು ಹೇಳಿದರು.

“ಕೊರೋನಾ ಜಾಗೃತಿ ಮೂಡಿಸಲು ಸುರೇಶ ಅಂಗಡಿ ರಾಜ್ಯಾದ್ಯಂತ ಸಂಚರಿಸಿದರು, ಜನರ ಹಿತ ಕಾಪಾಡಲು ತಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಿದರು, ರಾಜ್ಯದ ಅಭಿವೃದ್ಧಿ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಹಳ ಕನಸು ಹೊಂದಿದ್ದರು, ಅವರನ್ನು ಕಳೆದುಕೊಂಡು ರಾಜ್ಯರಾಜಕಾರಣ ಬಡವಾಗಿದೆ” ಎಂದು ಶೆಟ್ಟರ್ ಸಂತಾಪ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!