Belagavi

ಸರ್ವಸ್ವ ಆಗಿದ್ದ ಮೊಮ್ಮಗಳೊಂದಿಗೆ ಅಂಗಡಿ

ಆ ಮಗುವಿನ ಹೆಸರು ರಿದ್ಧಿಶಾ, ಬಾರ್ನ ವಿಥ್ ಸಿಲ್ವರ್ ಸ್ಪೂನ್ ಅಂತಾರಲ್ಲ ಹಾಗೆ ಇದು ಬಾರ್ನ ವಿಥ್ ಗೋಲ್ಡನ್ ಸ್ಪೂನ್ ಎನ್ನಬಹುದು ಏಕೆಂದರೆ ಅದರ ಅಜ್ಜ ಬೆಳಗಾವಿಯ ಸಂಸದ, ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ. ಸರಳತೆಗೆ, ವಿನಯತೆಗೆ ಉದಾಹರಣೆಯಾಗಿದ್ದ ಅವರು ಈ ಮಗು ಮನೆಯಲ್ಲಿ, ಗೃಹ ಕಚೇರಿಯಲ್ಲಿ ಎದುರು ಬಂದರೆ ಎಲ್ಲವನ್ನೂ ಮರೆತು ಮಗುವನ್ನು ಎತ್ತಿಕೊಂಡು ಮುದ್ದಾಡಿಸಿ ನಂತರ ತಮ್ಮ ಕೆಲಸಕ್ಕೆ ಅಟೆಂಡ್ ಆಗುತ್ತಿದ್ದರು.

ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಎಷ್ಟೇ ಒತ್ತಡದ ಕೆಲಸದಲ್ಲಿದ್ದರೂ ಆ ಮಗುವಿನ ಮುಖ ಕಂಡಾಕ್ಷಣ ತಾವೂ ಮಗುವಿನಂತೆ ಆಟವಾಡುತ್ತಿದ್ದರು. ಅನಾರೋಗ್ಯ ನಿಮಿತ್ತ ದೆಹಲಿಯ ಏಮ್ಸ್​ ಆಸ್ಪತ್ರೆಗೆ ಹೋಗುವ ಮುನ್ನ ಆ ಪುಟ್ಟ ಕಂದನ ಜತೆ ಕೆಲಕಾಲ ಕಳೆದಿದ್ದರು. ಅದೇ ಲಾಸ್ಟ. ಅವರು ಎತ್ತಿಕೊಂಡಿದ್ದ ಫೋಟೋ ಆ ಮಗುವಿನ ಫೋಟೋ ಅದರ ಜೀವನದ ಅಮೂಲ್ಯ ಆಸ್ತಿ.

ಅಂಗಡಿ ಅವರಿಗೆ ಮೊಮ್ಮಗಳು 2 ವರ್ಷದ ರಿದ್ದಿಶಾ ಅಂದ್ರೆ ಅಚ್ಚು ಮೆಚ್ಚು. ರಾಜಕೀಯ ಬಿಡುವಿನ ವೇಳೆ ಮನೆಯಲ್ಲಿ ಮೊಮ್ಮಗಳೊಂದಿಗೆ ಹೆಚ್ಚಾಗಿ ಕಾಲಕಳೆಯುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ಹಿರಿಯ ಮಗಳು ಸ್ಫೂರ್ತಿ ಅವರ ಮಗಳು.

ಅಗಲಿದ ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತನ್ನ ತಾಯಿ, ಬಾಂಧವರೊಂದಿಗೆ ದೆಹಲಿಗೆ ರಿದ್ದಿಶಾಗೆ ತಾನು ತಾತನನ್ನು ನೋಡಲು ಹೋಗುತ್ತಿರುವುದು ಅದೇ ಕೊನೇ ಸಲ, ತನ್ನಜ್ಜನನ್ನು ಇನ್ನೆಂದೂ ನೋಡಲಾರೆ ಎಂಬುವದು ಗೊತ್ತಿರಲಿಲ್ಲ.

ಅನಿರೀಕ್ಷಿತವಾಗಿ ಅಗಲಿದ ಅಜ್ಜನನು ಕೊನೆಯ ಸಲ ನೋಡಲು ಆ ಮಗುವಿಗೆ ಕೋವಿಡ್ ನಿಯಮ ಅವಕಾಶ ನೀಡಲಿಲ್ಲ. ಅಜ್ಜ ತನ್ನನ್ನು ಎತ್ತಿಕೊಂಡಿರುವ ಈ ಫೋಟೋ ಮಗುವಿನ ಲೈಫ್ ಟೈಮ್ ಮೆಮೊರಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!