Bengaluru

ಗಂಧವ೯ ಗಾಯಕ ಬಾಲಸುಬ್ರಮಣಿಯಮ್ ವಿಧಿವಶ

ಚೆನೈ, ೨೫- ಕಳೆದ 54 ದಿನಗಳಿಂದ ಚೆನ್ನೈನ ಎಂವಿಎಂ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ವಿಶ್ವದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣಿಯಮ್ ಇಂದು ಶುಕ್ರವಾರ ಮಧ್ಯಾಹ್ನ 1.04 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ.

ವಿಪರ್ಯಾಸವೆಂದರೆ, ತಾವು ನಿಧನರಾದ ಆಸ್ಪತ್ರೆಯನ್ನು ಕೆಲವರುಷಗಳ ಹಿಂದೆ ತಾವೇ ಉದ್ಘಾಟಿಸಿದ್ದರು.

74 ವರುಷವಾಗಿದ್ದ ಅವರು ಇಂಗ್ಲಿಷ್ ಸೇರಿದಂತೆ ಭಾರತದ ಹೆಚ್ಚುಕಡಿಮೆ ಎಲ್ಲ ಭಾಷೆಗಳಲ್ಲೂ ಹಾಡು ಹಾಡಿದ್ದಾರೆ.

“ಎಸ್ಪಿ ಸರ್” ಎಂದೇ ಖ್ಯಾತರಾಗಿದ್ದ ಅವರಿಗೆ ಚಿಕಿತ್ಸೆಕೊಡಲು ವಿದೇಶದಿಂದ ತಜ್ಞ ವೈದ್ಯರ ತಂಡವೊಂದು ಚೆನ್ನೈಗೆ ಬಂದಿತ್ತು.

ರಮೇಶ ಜಾರಕಿಹೊಳಿ‌ ಶೋಕ ಸಂದೇಶ

ಗಾನ ಗಂಧರ್ವ ಡಾ. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ.

ಇತ್ತೀಚೆಗಷ್ಟೇ ಕೋವಿಡ್ ಸೋಂಕಿಗೆ ಗುರಿಯಾಗಿ ಚಿಕಿತ್ಸೆ  ಪಡೆದಿದ್ದ ಎಸ್ ಪಿ ಬಿಅವರನ್ನು ಕಳೆದುಕೊಂಡ ಸಂಗೀತ ಕ್ಷೇತ್ರ ತುಂಬಾ ಬಡವಾಗಿದೆ.

ಬಹುಭಾಷಾ ಗಾಯಕರಾಗಿದ್ದ ಕಂಚಿನ ಕಂಠದ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು 16 ಭಾರತೀಯ ಭಾಷೆಗಳಲ್ಲಿ 4೦,೦೦೦ ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ‌ ಬರೆದ ಗಾಯಕ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಸರಸ್ವತಿ ಪುತ್ರರಾಗಿದ್ದ ಎಸ್ ಪಿ ಬಿ ಸಂಗೀತ ಮಾಂತ್ರಿಕರಾಗಿದ್ದರು.

ಅವರು ಹಾಡಿದ ಹಾಡುಗಳನ್ನು ಕೇಳುತ್ತಾ ಬೆಳೆದ ನಾವು ಅವರ ಅಗಲಿಕೆಯನ್ನೂ ನೋಡಬೇಕಾದ ಸಂದರ್ಭ ಬಂದಿದ್ದು ದುರ್ದೈವ.

ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಅವರ ಕುಟುಂಬದ ಸದಸ್ಯರಿಗೆ, ಅಪಾರ ಸಂಗೀತ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!