New Delhi

ಈರಣ್ಣ ಕಡಾಡಿ ಶೋಕ

ಹೊಸದಿಲ್ಲಿ, ೨೪- ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿಯವರ ಗೌರವಾರ್ಥ ಇಂದು ದೆಹಲಿಯ ಕರ್ನಾಟಕ ಭವನ -1ರಲ್ಲಿ ಪುಷ್ಪನಮನ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಜಿ. ಎಂ ಸಿದ್ದೇಶ, ಬಿ ವೈ ರಾಘವೇಂದ್ರ, ಪ್ರತಾಪ್ ಸಿಂಹ, ಸಚಿವ ವಿ ಸೊಮ್ಮಣ್ಣ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಈರಣ್ಣ ಕಡಾಡಿ ಮಾತನಾಡಿ, ನನಗೆ ತುಂಬಾ ಆತ್ಮೀಯರಾದ ಸುರೇಶ ಅಂಗಡಿಯವರು ಕೊರೊನಾ ಸೋಂಕಿನಿಂದ ನಿಧನರಾಗಿರುವ ಸುದ್ದಿ ತೀವ್ರ ದಿಗ್ಬ್ರಮೆ ಮೂಡಿಸಿದೆ‌.

ಇವರ ಸಾವಿನಿಂದ ನಮ್ಮ ಪಕ್ಷಕ್ಕೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.

ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಹೇಳಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!